ಸೂರ್ಯಂಗೂ ಚಂದ್ರಂಗೂ

ಶುಭ ಮಂಗಳ
ಎಂ. ಎನ್. ವ್ಯಾಸರಾವ್

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗ್ತಾದ ಭೂತಾಯಿ ಮನಸು

ರಾಜಂಗೂ ರಾಣಿಗೂ ಮುರಿದೋದ್ರೆ ಮನಸು

ಅರಮನೆಯಾಗೆ ಏನೈತೆ ಸೊಗಸು || ಪ ||

ಮನೆತುಂಬ ಹರಿದೈತೆ ಕೆನೆಹಾಲು ಮೊಸರು

ಎದೆಯಾಗೆ ಬೆರೆತೈತೆ ಬ್ಯಾಸರದ ಉಸಿರು

ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ

ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ || ೧ ||

ಬೆಳದಿಂಗಳು ಚೆಲ್ಲೈತೆ ಅಂಗಳದಾ ಒಳಗೆ

ಕರಿ ಮೋಡ ಮುಸಗೈತೆ ಮನಸಿನಾ ಒಳಗೆ

ಬಯಲಾಗೆ ತುಳುಕೈತೆ ಅರುಸದಾ ಹೊನಲು

ಪ್ರೀತಿಯ ತೇರಿಗೆ ಬಡಿದೈತೆ ಸಿಡಿಲು || ೨ ||

ಮುಂಬಾಗಿಲ ರಂಗೋಲಿ ಮನಗೈತಿ ಆಯಾಗಿ

ಕಿರುನಗೆಯ ಮುಖವೆಲ್ಲಾ ಮುದುಡೈತೆ ಸೊರಗಿ

ಆನಂದ ಸಂತೋಷ ಈ ಮನೆಗೆ ಬರಲೀ

ಬೇಡುವೆನು ಕೈ ಮುಗಿದು ಆ ನನ್ನ ಸಿವನ || ೩ ||

ಶುಭ ಮಂಗಳ

ಚಿತ್ರ ನೋಡಿ